ರಾಘವೇಂದ್ರ ಡಿ.ನಾಯಕ ದೇವರಬಾವಿ
ಸಂಸ್ಥಾಪಕ ಅಧ್ಯಕ್ಷರು, ಗೋದಾವರಿ ಸಮೂಹ ಸಂಸ್ಥೆಗಳು, ಹುಬ್ಬಳ್ಳಿ - ಗೋಕರ್ಣ
ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲಾ. ಆದರೆ ಸಾಧಿಸುವ ಛಲ ಮನುಷ್ಯನಿಗೆ ಬೇಕು. ಸತತ ಪರಿಶ್ರಮದಿಂದ ಓರ್ವ ವ್ಯಕ್ತಿ ಈ ನಾಡಿಗೆ ಮಾದರಿಯಾಗಬಹುದು ಎನ್ನುವುದಕ್ಕೆ ಸಾಕ್ಷಿ, ರಾಘವೇಂದ್ರ ಡಿ ನಾಯಕ ದೇವರಬಾವಿ.
ಇವರೊಬ್ಬ ಛಲಗಾರ, ಸಾಧಿಸಬೇಕು ಎನ್ನುವುದನ್ನು ಸಾಧಿಸಿಯೇ ತೋರಿಸುವ ಧೀಮಂತ ವ್ಯಕ್ತಿತ್ವ. ರಾಘವೇಂದ್ರ ನಾಯಕರವರು ಶಿಕ್ಷಕ ದಂಪತಿಗಳಾದ ದಿವಂಗತ ಶ್ರೀಮತಿ ಗೋದಾವರಿ ಮತ್ತು ದಿವಂಗತ ಶ್ರೀ ದಯಾನಂದ ನಾಯಕರ ಕಿರಿಯ ಮಗ. ಇವರಿಗೆ ತಂದೆ ತಾಯಿ ಎಂದರೆ ಬಹಳ ಗೌರವ. ಇವರ ಶಿಕ್ಷಣವು ಗೋಕರ್ಣದ ಭದ್ರಕಾಳಿ ಪ್ರೌಢಶಾಲೆಯಲ್ಲಿ ಜರುಗಿ ಪದವಿಪೂರ್ವ ಹಾಗೂ ಪದವಿ ಶಿಕ್ಷಣವು ಅಂಕೋಲಾದ ಜಿ.ಸಿ. ಕಾಲೇಜಿನಲ್ಲಿ ಪೂರೈಸಿ ರಾಘವೇಂದ್ರ ನಾಯಕ ಅತಿ ಚಿಕ್ಕ ವಯಸ್ಸಿನಲ್ಲಿಯೇ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಉದ್ಯಮ ಆರಂಭಿಸಿದ ದಿನದಿಂದ ಸಮಯಕ್ಕೆ ಆದ್ಯತೆ ನೀಡಿದರು. ಅವರು ಈ ವಿಚಾರದಲ್ಲಿ ಎಲ್ಲಿಯೂ ವಿರಮಿಸಲೇ ಇಲ್ಲ.
ಹುಬ್ಬಳ್ಳಿಯಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿಯೇ ಗೋದಾವರಿ ಇಂಡಸ್ಟ್ರೀಸ್ “Poultry Feed Supplementary Manufacturing Unit” ಎಂಬ ಉದ್ಯಮವನ್ನು ಆರಂಭಿಸಿ ಯುವ ಯಶಸ್ವಿ ಉದ್ಯಮಿಯಾಗಿ ಯಶಸ್ಸನ್ನು ಪಡೆದರು.
ತದನಂತರ ಹುಬ್ಬಳ್ಳಿಯಲ್ಲಿ ಆರಂಭಿಸಿದ ಗೋದಾವರಿ ಇನ್ನಾ-ಎಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೊಸ ಉದ್ಯಮವನ್ನು ಕಟ್ಟಿ ನೂರಾರು ಜನರಿಗೆ ಉದ್ಯೋಗಾವಕಾಶ ನೀಡಿ ಹೊಸದೊಂದು ಅಧ್ಯಾಯವನ್ನೇ ತೆರೆದು ಯಶಸ್ವಿ ಯುವ ಉದ್ಯಮಿಯಾಗಿ ಹುಬ್ಬಳ್ಳಿಯಲ್ಲಿ ಗುರುತಿಸಿಕೊಂಡರು. ತಾಯಿ ಗೋದಾವರಿ ಹೆಸರನ್ನು ಶಾಶ್ವತವಾಗಿ ಇಡಬೇಕೆಂಬ ಕಲ್ಪನೆಗೆ ಇದು ಮೊದಲ ಮೆಟ್ಟಿಲಾಯಿತು.
ಇವರು ತನ್ನ ತಾಯಿಯ ಹೆಸರಿನ ಸ್ಮರಣಾರ್ಥವಾಗಿ ಗೋದಾವರಿ ಸಭಾಭವನವನ್ನು ತಮ್ಮ ಕೈಗಾರಿಕಾ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿಯ ಅಂಚಟಗೇರಿಯಲ್ಲಿ ನಿರ್ಮಿಸಿ ಬಡವರ ಕಲ್ಯಾಣಕ್ಕಾಗಿ ಈ ಸಭಾಭವನವನ್ನು ನಿರ್ಮಿಸಿದ್ದು, ಅಲ್ಲಿ ಯಾವುದೇ ಬಡವರ ವಿವಾಹವಾದರೆ ಅವರಿಗೆ 10 ಸಾವಿರ ನಗದನ್ನು ಕಳೆದ ಹದಿನೈದು ವರ್ಷದಿಂದ ನೀಡುತ್ತಾ ಬಂದಿದ್ದು, ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಬೋಧನೆಗೆ ಅನುಕೂಲವಾಗಲು ತಮ್ಮ ಸ್ವಂತ ಖರ್ಚಿನಿಂದ ಶಿಕ್ಷಣವನ್ನು ಕಲ್ಪಿಸಿದ್ದಾರೆ.
ಇವರಿಗೆ ಆರ್ಥಿಕ ಕ್ಷೇತ್ರದಲ್ಲಿ ಏನಾದರೂ ಮಾಡಬೇಕೆಂಬ ಹೆಬ್ಬಯಕೆಯಿಂದ ತಮ್ಮ ತಾಯಿಯ ಹೆಸರಾದ ದಿವಂಗತ ಶ್ರೀಮತಿ ಗೋದಾವರಿ ಅವರ ಹೆಸರಿನಲ್ಲಿ ಶ್ರೀ ಕ್ಷೇತ್ರ ಗೋಕರ್ಣದಲ್ಲಿ 2010ರಲ್ಲಿ ಗೋದಾವರಿ ಸೌಹಾರ್ದ ಸಹಕಾರಿಯೆಂಬ ಹಣಕಾಸು ಸಂಸ್ಥೆಯನ್ನು ಹುಟ್ಟು ಹಾಕಿದರು. ಈ ಸಹಕಾರಿಯು ಜಿಲ್ಲೆಯ ಅತ್ಯುನ್ನತ ಹಾಗೂ ಮಾದರಿ ಸಹಕಾರಿ ಎಂದೇ ಗೌರವಕ್ಕೆ ಪಾತ್ರವಾಗಿದ್ದು, ತದನಂತರ ಗೋದಾವರಿ ಸೌಹಾರ್ದ ಸಹಕಾರಿಯನ್ನು ಜಿಲ್ಲೆಯ ಹಲವು ತಾಲೂಕುಗಳಲ್ಲೂ ಆರಂಭಿಸಲಾಗಿದ್ದು ಈ ಸಹಕಾರಿಯ ಮೂಲಕ ಹತ್ತು ಹಲವು ವಿಧಾಯಕ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿವೆ. ಅದರಲ್ಲಿ ಶಿರೂರು ಗುಡ್ಡ ಕುಸಿತವಾದಾಗ ಗೋದಾವರಿ ಸಂಸ್ಥೆಯಿಂದ ಪ್ರಪ್ರಥಮವಾಗಿ ತ್ವರಿತವಾಗಿ ನೆರೆಪೀಡಿತ ಜನರಿಗೆ ಜೀವನಾವಶ್ಯಕ ಸಾಮಗ್ರಿಗಳನ್ನು ನೀಡಿದ ಕೀರ್ತಿ ನಮ್ಮ ಗೋದಾವರಿ ಸಂಸ್ಥೆಗೆ ಸಲ್ಲುತ್ತದೆ. ಕೊರೊನಾ ಕೋವಿಡ್ 19 ಮಹಾಮಾರಿ ಸಂದರ್ಭದಲ್ಲಿ ಗೋದಾವರಿ ಸಮೂಹ ಸಂಸ್ಥೆಯಿಂದ ಎಲ್ಲ ಸಿಬ್ಬಂದಿಗಳು ಹಾಗೂ ಅಧ್ಯಕ್ಷರು ಸೇರಿ ಕೊರೊನಾ ವಾರಿಯರ್ಸ್ ಆಗಿ ಪಾಂಡೆಮಿಕ್ನಲ್ಲಿ ಸೇವೆ ಸಲ್ಲಿಸಿರುತ್ತಾರೆ.
ಹಾಗೆಯೇ ಗೋದಾವರಿ ಪರಂಪರೆಯೆಂಬಂತೆ ಪ್ರತಿ ವರ್ಷ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದಂದು ಸಾಧಕರನ್ನು ಗುರುತಿಸಿ ಸನ್ಮಾನಿಸುವುದು, ಸಂಕಷ್ಟದಲ್ಲಿರುವವರಿಗೆ ಆರ್ಥಿಕ ಸಹಕಾರ ನೀಡುವುದು ಇವರ ವಿಶೇಷ ಗುಣ. ಇವರು ತಮ್ಮ ಪರಿಶ್ರಮ ಹಾಗೂ ಶಿಸ್ತಿನ ಮೂಲಕ ಗೋದಾವರಿ ಸೌಹಾರ್ದ ಸಹಕಾರಿಯನ್ನು ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ, ಜಿಲ್ಲಾ ಮಟ್ಟದಿಂದ ವಿಭಾಗೀಯ ಮಟ್ಟಕ್ಕೆ, ವಿಭಾಗೀಯ ಮಟ್ಟದಿಂದ ರಾಜ್ಯಮಟ್ಟದ ಸಹಕಾರಿಯನ್ನಾಗಿ ಮಾಡಿ ಕರ್ನಾಟಕದಲ್ಲಿ ಕೆಲವೇ ಕೆಲವು ಬೆರಳೆಣಿಕೆಯಷ್ಟು ಸಹಕಾರಿಗಳ ಸಾಲಿನಲ್ಲಿ ಬರುವ ಹಾಗೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಇದರ ಜೊತೆಯಲ್ಲಿ ತನ್ನ ತಾಯಿ ಕನಸನ್ನು ನನಸು ಮಾಡುವುದಕ್ಕಾಗಿ ದಕ್ಷಿಣದ ಕಾಶಿ ಎಂದೆನ್ನಿಸಿಕೊಂಡಿರುವ ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಶ್ರೀಮತಿ ದಿವಂಗತ ಗೋದಾವರಿ ತಾಯಿಯ ನೆನಪಿಗಾಗಿ ಹೋಟೆಲ್ ದಿ ಗೋದಾವರಿ ಎನ್ನುವ ತ್ರೀ ಸ್ಟಾರ್ ಹೋಟೆಲ್ನ್ನು ಶ್ರೀ ಕ್ಷೇತ್ರ ಗೋಕರ್ಣದ ದ್ವಾರದಲ್ಲಿಯೇ ನಿರ್ಮಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತ್ಯಂತ ಸುಸಜ್ಜಿತ ಹಾಗೂ ಪ್ರತಿಷ್ಠಿತ ಹೋಟೆಲ್ಗಳ ಶ್ರೇಣಿಯಲ್ಲಿ ಅತ್ಯುನ್ನತ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಹಾಗೂ ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಹೋಟೆಲ್ ಉದ್ಯಮಕ್ಕೆ ಒಂದು ಹೊಸ ಆಯಾಮವನ್ನು ಪ್ರವಾಸೋದ್ಯಮಕ್ಕೆ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ರಾಘವೇಂದ್ರ ನಾಯಕ ಇವರೊಬ್ಬ ಕ್ರಿಯಾಶೀಲ ಯುವ ನಾಯಕರಾಗಿದ್ದು ರಾಜಕಾರಣವನ್ನು ಎಲ್ಲಿಯೂ ಮೆತ್ತಿಕೊಳ್ಳದೆ ಪ್ರತಿಯೊಬ್ಬರನ್ನೂ ಗೌರವಿಸುವ ಮೇಧಾವಿಗಳು. ಸಮಾಜದ ಅತಿ ಕಡೆಯ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಸಜ್ಜನರು. ಇವರೊಬ್ಬ ಕ್ರೀಡಾ ಪ್ರೋತ್ಸಾಹಕರು, ಕಲೆ, ಸಾಹಿತ್ಯ, ಶಿಕ್ಷಣ ಹೀಗೆ ಹಲವು ಮಜಲುಗಳಲ್ಲಿ ಗುರುತಿಸಿಕೊಂಡವರು. ಇವಕ್ಕೆಲ್ಲ ಆರ್ಥಿಕ ನೆರವು ನೀಡಿ ಹಲವಾರು ದುಡಿಯುವ ಕೈಗಳಿಗೆ ಕೆಲಸ ನೀಡಿ ಯುವ ಸಮುದಾಯ ಬದುಕು ಕಟ್ಟಿಕೊಳ್ಳಲು ಸಹಕರಿಸುತ್ತಿದ್ದಾರೆ. ಈ ಎಲ್ಲಾ ಸಾಧನೆಗಳ ಹಿಂದೆ ಇವರ ಪತ್ನಿ ನೂತನಾ ಅವರ ಸಹಕಾರವಿದೆ. ಇವರಿಗೆ ಬೇರೆ ಬೇರೆ ಕ್ಷೇತ್ರದಲ್ಲಿ ತೋರಿದ ಅಗ್ರಮಾನ್ಯ ಸೇವೆಗೆ ಹಲವಾರು ಪ್ರಶಸ್ತಿ, ಗೌರವಗಳು ಅರಸಿಕೊಂಡು ಬಂದಿವೆ.
ಗೋದಾವರಿ ಸಮೂಹ ಸಂಸ್ಥೆಯ ಮಾಲೀಕತ್ವದ ಗೋದಾವರಿ ಇನ್ನಾ-ಎಕ್ಸ್ ಪ್ರೈವೇಟ್ ಲಿಮಿಟೆಡ್ ಹುಬ್ಬಳ್ಳಿ ಈ ಸಂಸ್ಥೆಗೆ 2019ರಲ್ಲಿ ಕೇಂದ್ರ ಸರಕಾರದಿಂದ “HIGHLY POLLUTED MATERIAL MANAGEMENT AWARD”ನ್ನು ನೀಡಿ ರಾಘವೇಂದ್ರ ನಾಯಕರವರಿಗೆ ಗೌರವಿಸಲಾಗಿದೆ.
ಗೋದಾವರಿ ಕ್ರೆಡಿಟ್ ಸೌಹಾರ್ದ ಸಹಕಾರಿ ಉತ್ತರ ಕನ್ನಡ ಜಿಲ್ಲೆಯ ಮಾದರಿ ಸಹಕಾರಿಯಾಗಿದ್ದು ಗೋಕರ್ಣದಲ್ಲಿ ಪ್ರಧಾನ ಕಚೇರಿ ಸೇರಿದಂತೆ 7 ತಾಲೂಕುಗಳಲ್ಲಿ 7 ಶಾಖೆಗಳನ್ನು ಹೊಂದಿದ್ದು ಪ್ರತಿಯೊಂದು ಶಾಖೆಗಳಿಗೂ ಹೈಟೆಕ್ ಟಚ್ ನೀಡಲಾಗಿದೆ. ಸಿಬ್ಬಂದಿಗಳನ್ನು ನೋಡಿಕೊಳ್ಳುವ ರೀತಿ, ಸಿಬ್ಬಂದಿಗಳು ಗ್ರಾಹಕರೊಡನೆ ವ್ಯವಹರಿಸುವ ಉತ್ತಮ ಕಾರ್ಯ ನಿರ್ವಹಣೆಗಾಗಿ 2023-24ರ ಸಾಲಿನಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿಯು ಪ್ರತಿ ವರ್ಷ ಕೊಡ ಮಾಡುವ “ಕರ್ನಾಟಕ ರಾಜ್ಯ ಶ್ರೇಷ್ಠ ಸಹಕಾರಿ ಪ್ರಶಸ್ತಿ”ಯನ್ನು ಗೋದಾವರಿ ಸೌಹಾರ್ದ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ರಾಘವೇಂದ್ರ ನಾಯಕ ದೇವರಭಾವಿಯವರಿಗೆ ದೊರೆತಿದ್ದು ಇದರಿಂದ ರಾಜ್ಯದಲ್ಲಿಯೇ ಸಹಕಾರಿ ರಂಗದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ರಾಜ್ಯ ಶ್ರೇಷ್ಠ ಸಹಕಾರಿ ಪ್ರಶಸ್ತಿ ಪುರಸ್ಕೃತರಾಗಿದ್ದು ಕಿರಿಯ ವಯಸ್ಸಿನಲ್ಲಿಯೇ ಹಿರಿಯ ಗೌರವ ದೊರೆತ ಹಿರಿಮೆ ಇವರದ್ದಾಗಿದೆ.
2023 ರಲ್ಲಿ ಹುಬ್ಬಳ್ಳಿ ನಗರದಲ್ಲಿ “ರೋಟರಿ ಕ್ಲಬ್ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ.
2024ರ ಅಂಕೋಲಾ ಉತ್ಸವ ಸಮಿತಿಯಿಂದ “ಅಂಕೋಲಾ ಸ್ವಾತಂತ್ರ್ಯ ಸಂಗ್ರಾಮ” ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತಾರೆ.
2025 ರಲ್ಲಿ ಬಹುಮುಖ ಸಾಧಕ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ.
2025 ರಲ್ಲಿ ಉತ್ತರ ಕನ್ನಡ ಜಿಲ್ಲಾ 25 ನೇ ಕನ್ನಡ ಸಾಹಿತ್ಯ ಸಮ್ಮೇಳನ ದಾಂಡೇಲಿಯಲ್ಲಿ ರಜತ ಗೌರವ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ.
ಪರಿಸರ ಕಾಳಜಿ, ಸಮಾಜದ ವಿದಾಯಕ ಕಾರ್ಯಗಳು, ರಾಷ್ಟ್ರೀಯ ಹಬ್ಬಗಳು, ಶೈಕ್ಷಣಿಕ ಕಾಳಜಿ, ಕ್ರೀಡಾ ಪ್ರೋತ್ಸಾಹ, ಆರ್ಥಿಕ ಸಂಕಷ್ಟಕ್ಕೆ ಧ್ವನಿಯಾಗಿರುವುದು ಸೇರಿದಂತೆ ಇವರು ಅತೀಕಿರಿಯ ವಯಸ್ಸಿನಲ್ಲಿ ಸಮಾಜದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಪ್ರತಿಷ್ಠಿತ ಸಂಸ್ಥೆಯಾಗಿರುವ ವಿಶ್ವವಾಣಿ ಗ್ರುಪ್ ರಷ್ಯಾದೇಶದ ರಾಜಧಾನಿ ಮಾಸ್ಕೋದಲ್ಲಿ ಭಾರತ ಹಾಗೂ ರಷ್ಯಾ ಸರ್ಕಾರದ ಹಿರಿಯ ಅಧಿಕಾರಿಗಳ ಸಮ್ಮೇಳನದಲ್ಲಿ “ಗ್ಲೋಬಲ್ ಅಚೀವರ್ಸ ಅವಾರ್ಡ” ಎಂಬ ಅಗ್ರಮಾನ್ಯ ಪ್ರಶಸ್ತಿಯನ್ನು ನೀಡಿ ವಿಶ್ವ ಮಟ್ಟದಲ್ಲಿ ಗುರುತಿಸಿದೆ. ಇದರಿಂದ ಗೋದಾವರಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ರಾಘವೇಂದ್ರ ನಾಯಕರವರಿಗೆ ಜಾಗತಿಕ ಮಟ್ಟದ ಗೌರವ ದೊರೆತಂತಾಗಿದೆ.
ಗೋದಾವರಿ ಸಮೂಹ ಸಂಸ್ಥೆಗಳ ಅಂಗ ಸಂಸ್ಥೆಗಳಾದ, ಸಹಕಾರರಂಗ, ಕೈಗಾರಿಕಾರಂಗ, ಗೋದಾವರಿ ಇನ್ನಾ-ಎಕ್ಸ್ ಪ್ರೈವೇಟ್ ಲಿಮಿಟೆಡ್ ಗೋದಾವರಿ ಇಂಡಸ್ಟ್ರೀಜ್ ಹಾಗೂ ಗೋದಾವರಿ ಹೋಟೇಲ್ಸ್ ಆಂಡ್ ಹಾಸ್ಪಿಟಾಲಿಟಿಸ್ ಜೊತೆಗೆ ಬಿಡುವಿಲ್ಲದ ದುಡಿಮೆ ಹಾಗೂ ಗ್ರಾಹಕರು ಮತ್ತುತನ್ನ ಸಿಬ್ಬಂದಿಗಳನ್ನು ಗೌರವಿಸುವ ಇವರ ವ್ಯಕ್ತಿತ್ವಕ್ಕೆ ಇವರೇ ಸಾಟಿ.


Leave A Comment