ರಾಘವೇಂದ್ರ ಡಿ.ನಾಯಕ ದೇವರಬಾವಿ ಸಂಸ್ಥಾಪಕ ಅಧ್ಯಕ್ಷರು, ಗೋದಾವರಿ ಸಮೂಹ ಸಂಸ್ಥೆಗಳು, ಹುಬ್ಬಳ್ಳಿ – ಗೋಕರ್ಣ ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲಾ. ಆದರೆ ಸಾಧಿಸುವ ಛಲ ಮನುಷ್ಯನಿಗೆ ಬೇಕು. ಸತತ ಪರಿಶ್ರಮದಿಂದ ಓರ್ವ ವ್ಯಕ್ತಿ ಈ ನಾಡಿಗೆ ಮಾದರಿಯಾಗಬಹುದು ಎನ್ನುವುದಕ್ಕೆ ಸಾಕ್ಷಿ, ರಾಘವೇಂದ್ರ ಡಿ ನಾಯಕ ದೇವರಬಾವಿ. ಇವರೊಬ್ಬ ಛಲಗಾರ, ಸಾಧಿಸಬೇಕು ಎನ್ನುವುದನ್ನು ಸಾಧಿಸಿಯೇ ತೋರಿಸುವ ಧೀಮಂತ ವ್ಯಕ್ತಿತ್ವ. ರಾಘವೇಂದ್ರ ನಾಯಕರವರು ಶಿಕ್ಷಕ ದಂಪತಿಗಳಾದ ದಿವಂಗತ ಶ್ರೀಮತಿ ಗೋದಾವರಿ ಮತ್ತು ದಿವಂಗತ ಶ್ರೀ ದಯಾನಂದ ನಾಯಕರ ಕಿರಿಯ ಮಗ. […]

